ದೆಹಲಿಯಲ್ಲಿ ಮುಂದುವರಿದ ಹಿಂಸಾಚಾರ ವಾತಾವರಣ:ಪರಿಸ್ಥಿತಿ ಹತೋಟಿಗೆ ಪೊಲೀಸರು ಸನ್ನದ್ಧ - ದೆಹಲಿ ಪೊಲೀಸರ ಕಾರ್ಯಾಚರಣೆ
ರಾಜಧಾನಿ ದೆಹಲಿಯಲ್ಲಿ ಭಾನುವಾರ ಸಂಜೆಯ ಹಿಂಸಾಚಾರದ ನಂತರವೂ ಅವ್ಯವಸ್ಥೆಯ ವಾತಾವರಣ ಮನೆಮಾಡಿತ್ತು. ಇದರ ನಂತರ ಇಲ್ಲಿನ ಅನೇಕ ಪ್ರದೇಶಗಳಲ್ಲಿನ ಮಾರುಕಟ್ಟೆಗಳು ಬಂದಾದವು. ಮಾತ್ರವಲ್ಲದೇ, ಜನರು ತಮ್ಮ ಮನೆ, ಕುಟುಂಬಸ್ಥರ ರಕ್ಷಣೆಗಾಗಿ ಹೊರಗೆ ಓಡಾಡುವಾಗ ದೊಣ್ಣೆ, ಕೋಲುಗಳನ್ನು ಹಿಡಿದುಕೊಂಡು ಬರುತ್ತಿದ್ದರು. ಇನ್ನೂ ಪರಿಸ್ಥಿತಿಯನ್ನ ಹತೋಟಿಗೆ ತರಲೆಂದು ಪೊಲೀಸರು ಕೂಡ ಕಾರ್ಯಪ್ರವೃತ್ತರಾಗಿದ್ದರು.