ಬೆಳ್ಳಂಬೆಳಗ್ಗೆ ವರುಣನ ಆರ್ಭಟ... ರಾಜಧಾನಿಯಲ್ಲಿ ಮಳೆಯ ಸಿಂಚನ! - ರಾಷ್ಟ್ರರಾಜಧಾನಿಯಲ್ಲಿ ಮಳೆಯ ಸಿಂಚನ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ವಿವಿಧ ಪ್ರದೇಶಗಳಲ್ಲಿ ಇಂದು ಬೆಳ್ಳಂಬೆಳಗ್ಗೆ ವರುಣ ಆರ್ಭಟಿಸಿದ್ದು, ಇದರಿಂದ ವಾಹನ ಸವಾರರು ಪರದಾಟ ನಡೆಸಿದರು. ಕಳೆದೆರಡು ದಿನಗಳ ಹಿಂದೆ ಇಲ್ಲಿ ಮಳೆ ಸುರಿದಿತ್ತು. ಆದರೆ ಇಂದು ಬೆಳಗ್ಗೆ ಏಕಾಏಕಿಯಾಗಿ ಮಳೆಯಾಗಿದ್ದು, ಜನಸಾಮಾನ್ಯರು ತೊಂದರೆ ಅನುಭವಿಸಿದರು.