ಅಮಿತ್ ಶಾ ಬ್ಯಾನರ್ಗೆ ಪೊರಕೆ ಸೇವೆ ಮಾಡಿದ ಆಪ್... ಇಲ್ಲಿದೆ ಆ ವಿಡಿಯೋ! - ಗೃಹ ಸಚಿವ ಅಮಿತ್ ಶಾ ಫೋಟೋ
ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ದೆಹಲಿ ವಿಧಾನಸಭೆಯಲ್ಲಿ 50ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ಕನ್ಪರ್ಮ್ ಆಗ್ತಿದ್ದಂತೆ ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಇದೇ ವೇಳೆ, ಗೃಹ ಸಚಿವ ಅಮಿತ್ ಶಾ ಅವರ ಫೋಟೋಗೆ ಕಾರ್ಯಕರ್ತರು ಪೊರಕೆಯಿಂದ ಹೊಡೆದಿದ್ದಾರೆ. 2015ರ ಫಲಿತಾಂಶಕ್ಕೆ ಹೋಲಿಕೆ ಮಾಡಿದರೆ ಈ ಸಲ ಬಿಜೆಪಿ ಕೆಲವೊಂದು ಸ್ಥಾನಗಳಲ್ಲಿ ಗೆಲುವು ಸಾಧಿಸಿ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಲು ಅರ್ಹತೆ ಪಡೆದುಕೊಂಡಿದೆ. ಆದರೆ, ಅಧಿಕಾರ ರಚನೆ ಮಾಡುವ ಕನಸು ಕಾಣುತ್ತಿದ್ದ ಬಿಜೆಪಿಗೆ ಮಾತ್ರ ಭಾರಿ ಹಿನ್ನಡೆಯಾಗಿದೆ.