ಕೊರೊನಾಗೆ ಬಲಿಯಾದ ಆರೋಗ್ಯ ಕಾರ್ಯಕರ್ತೆಯ ಕೊನೆಯ ಮಾತು ಕೇಳಿ... - Corona cases in Kerala
ವಯನಾಡ್ (ಕೇರಳ): ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆರೋಗ್ಯ ಕಾರ್ಯಕರ್ತೆಗೂ ಸೋಂಕು ತಗುಲಿತ್ತು. ತನ್ನ ಸಾವಿಗೂ ಮುನ್ನ ಈಕೆ ಕೊನೆಯ ಬಾರಿ ಆಡಿರುವ ಮಾತುಗಳು ಮನಮಿಡಿಯುವಂತಿದೆ. 'ಎಲ್ಲರೂ ನನಗಾಗಿ ಪ್ರಾರ್ಥಿಸಿ..' ಎಂದು ನಗುಮೊಗದಿಂದಲೇ ಕೋರಿರುವ ಅಶ್ವಥಿ ಮತ್ತೆ ಬದುಕಿ ಬರಲಿಲ್ಲ. ಕೋವಿಡ್ ಲ್ಯಾಬ್ ತಂತ್ರಜ್ಞೆಯಾಗಿ ಕೆಲಸ ನಿರ್ವಹಿಸುತ್ತಿದ್ದ ಯುವತಿ ಮಾನಂತವಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.