ಮಾನವೀಯತೆ ಮರೆತ ಆಸ್ಪತ್ರೆ ಸಿಬ್ಬಂದಿ: ಶವವನ್ನು ಬೈಕ್ಲ್ಲೇ ಸಾಗಿಸಿದ ಕುಟುಂಬಸ್ಥರು! - ಪುರಿ ಮೃತದೇಹ ಸುದ್ದಿ
ಕೆಲವೆಡೆ ವೈದ್ಯಕೀಯ ಸೇವೆಗಳು ಮತ್ತು ಮೂಲಸೌಕರ್ಯಗಳು ಯಾವ ಮಟ್ಟದಲ್ಲಿವೆ ಎಂಬುದಕ್ಕೆ ಕೆಲ ಘಟನೆಗಳು ಆಗಾಗ್ಗೆ ಬೆಳಕಿಗೆ ಬರುತ್ತಲೇ ಇವೆ. ಇಂತಹ ದಯನೀಯ ಪರಿಸ್ಥಿತಿಗೆ ಈ ಘಟನೆಯೇ ಸಾಕ್ಷಿಯಾಗಿದೆ. ಒಡಿಶಾದ ಪುರಿಯ ಆಸ್ಪತ್ರೆಯಲ್ಲಿ ಅಕ್ರುತಾ ಜೆನಾ ಎಂಬ ವ್ಯಕ್ತಿ ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಜಿಲ್ಲಾಸ್ಪತ್ರೆಯವರು ಶವ ಸಾಗಿಸುವ ವಾಹನವನ್ನು ಕೊಡಲು ನಿರಾಕರಿಸಿದ್ದರು ಎನ್ನಲಾಗ್ತಿದೆ. ಕುಟುಂಬಸ್ಥರು ಅಕ್ರುತಾ ಜೆನಾರ ಮೃತದೇಹವನ್ನು ಆಟೋದಲ್ಲಿ ತರಲು ಹಣದ ಕೊರತೆ ಎದುರಾಗಿದೆ. ಹೀಗಾಗಿ ಮೃತದೇಹವನ್ನು ದ್ವಿಚಕ್ರ ವಾಹನದಲ್ಲಿ ಮನೆಗೆ ತೆಗೆದುಕೊಂಡು ಹೋಗಿದ್ದಾರೆ.