ಶವಸಂಸ್ಕಾರಕ್ಕೂ ಜಾತಿ ಪದ್ಧತಿ ಅಡ್ಡಿ... 20 ಅಡಿ ಸೇತುವೆ ಮೇಲ್ಬಾಗದಿಂದ ಕೆಳಕ್ಕೆ ಶವ ರವಾನೆ.. ವಿಡಿಯೋ
ಕೆಳ ಜಾತಿಗೆ ಸೇರಿದ ವ್ಯಕ್ತಿಯ ಮೃತದೇಹವನ್ನು ತೆಗೆದುಕೊಂಡು ಹೋಗಲು ಮೇಲ್ಜಾತಿ ಜನರು ಅನುಮತಿ ನೀಡದ ಕಾರಣದಿಂದ ಶವವನ್ನು 20 ಅಡಿ ಎತ್ತರದಿಂದ ಸೇತುವೆಯ ಕೆಳಕ್ಕೆ ಇಳಿಸಿ ಸ್ಮಶಾನಕ್ಕೆ ತೆಗೆದುಕೊಂಡು ಹೋದ ಘಟನೆ ತಮಿಳುನಾಡಿನ ವೆಲ್ಲೂರಿನಲ್ಲಿ ನಡೆದಿದೆ. ಸೇತುವೆಯ ಮುಂದಕ್ಕೆ ಮೇಲ್ಜಾತಿಯವರಿಗೆ ಸೇರಿದ ಕೃಷಿ ಭೂಮಿ ಇದ್ದ ಹಿನ್ನೆಲೆಯಲ್ಲಿ ಅನುಮತಿ ನಿರಾಕರಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ತಮಗೆ ಸ್ವಂತ ಸ್ಮಶಾನಕ್ಕೆ ಜಾಗ ನೀಡುವಂತೆ ಜಿಲ್ಲಾಧಿಕಾರಿಗೆ ಕೆಳ ಸಮುದಾಯದ ಮುಖಂಡರು ಮನವಿ ಪತ್ರ ಸಲ್ಲಿಸಿದ್ದಾರೆ.