ಕೇರಳದಲ್ಲೂ ನಾವು ಅಧಿಕಾರಕ್ಕೆ ಬರಲಿದ್ದೇವೆ: ಡಿಸಿಎಂ ಅಶ್ವತ್ಥ್ ನಾರಾಯಣ್ - ಕರ್ನಾಟಕ ಉಪಚುನಾವಣೆ
ನಾವು ಕೇರಳದಲ್ಲಿ ಸಹ ಅಧಿಕಾರಕ್ಕೆ ಬರಲಿದ್ದು,ರಾಜ್ಯದ ಅಭಿವೃದ್ಧಿಗೆ ಪಣತೊಡಲಿದ್ದೇವೆ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ. ಕೇರಳ ಬಿಜೆಪಿ ಚುನಾವಾಣಾ ಉಸ್ತುವಾರಿಯಾಗಿರುವ ಡಿಸಿಎಂ, ರಾಜ್ಯದಲ್ಲಿ ಮತಯಾಚನೆ ನಡೆಸಿದ್ದಾರೆ. ಎಡ ಪಕ್ಷಗಳ ಆಡಳಿತದಿಂದ ಜನಸಾಮಾನ್ಯರು ಬೇಸತ್ತಿದ್ದಾರೆ. ನಮ್ಮ ಪ್ರಣಾಳಿಕೆಯಲ್ಲಿ ಎಲ್ಲವನ್ನೂ ತಿಳಿಸಿದ್ದೇವೆ. ಎಡ ಪಕ್ಷಗಳು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿವೆ ಎಂದರು.