ಕರ್ನಾಟಕ

karnataka

ETV Bharat / videos

ರಸ್ತೆ ಮಧ್ಯದಲ್ಲಿ ಬೃಹತ್​ ಗಾತ್ರದ ಮೊಸಳೆ ನೋಡಿ ದಂಗಾದ ಜನ! ವಿಡಿಯೋ... - ಸೂರ್ಯಪೇಟ ಮೊ ಸಳೆ

By

Published : Aug 17, 2020, 12:45 PM IST

Updated : Aug 17, 2020, 12:56 PM IST

ತೆಲಂಗಾಣದ ಸೂರ್ಯಪೇಟ ಜಿಲ್ಲೆಯಲ್ಲಿ ಮೊಸಳೆಯೊಂದು ಆತಂಕ ಸೃಷ್ಟಿಸಿರುವ ಘಟನೆ ನಡೆದಿದೆ. ಸಮೀಪದ ವಜೀನೆಪಲ್ಲಿ ಗ್ರಾಮದ ಹೊರವಲಯದ ರಸ್ತೆ ಮಧ್ಯದಲ್ಲಿ ಮೊಸಳೆಯೊಂದು ಕಾಣಿಸಿಕೊಂಡಿದೆ. ಆ ರಸ್ತೆ ಮೂಲಕ ತೆರಳುತ್ತಿದ್ದ ಪ್ರಯಾಣಿಕರು ಬೃಹತ್ ಗಾತ್ರದ​ ಮೊಸಳೆ ಕಂಡು ಭಯಭೀತರಾಗಿದ್ದರು. ಸ್ವಲ್ಪ ಸಮಯದ ಬಳಿಕ ಮೊಸಳೆ ಮತ್ತೆ ನದಿ ಕಡೆ ತೆರಳಿದೆ. ಮೊಸಳೆಯ ಗಾತ್ರವನ್ನು ನೋಡಿದ ಪ್ರಯಾಣಿಕರ ಎದೆ ಒಂದು ಕ್ಷಣ ಝಲ್​ ಎಂದಿದೆ. ಮೊಸಳೆ ತೆರಳಿದ ಬಳಿಕ ಪ್ರಯಾಣಿಕರು ತಮ್ಮ ಊರಿನತ್ತ ಪ್ರಯಾಣ ಬೆಳಸಿದ್ದಾರೆ. ಈ ದೃಶ್ಯವನ್ನು ಕೆಲವರು ತಮ್ಮ ಮೊಬೈಲ್​ ಫೋನ್​ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
Last Updated : Aug 17, 2020, 12:56 PM IST

ABOUT THE AUTHOR

...view details