ಠಾಣೆಗೆ ನುಗ್ಗಿದ ಮೊಸಳೆ... ಹೊಸ ಅತಿಥಿ ಕಂಡು ಪೊಲೀಸರ ಎದೆಯಲ್ಲಿ ಢವ.. ಢವ..! - ಲಕಿಮ್ಪುರ್ ಖೇರಿ ಮೊಸಳೆ ಸುದ್ದಿ
ಮಳೆ ಬಂತಂದ್ರೆ ಸಾಕು ನದಿ ದಡದಲ್ಲಿರುವ ಪ್ರದೇಶಗಳಿಗೆ ಮೊಸಳೆ ಕಾಟ ಶುರುವಾಗುವುದು ಸಾಮಾನ್ಯ. ಆದ್ರೆ ಉತ್ತರಪ್ರದೇಶದ ಲಕಿಮ್ಪುರ್ ಖೇರಿಯಲ್ಲಿ ಮೊಸಳೆಯೊಂದು 12 ಪೊಲೀಸರಿಗೆ ಸಡನ್ ಆಗಿಯೇ ಶಾಕ್ ನೀಡಿದೆ. ಹೌದು, ನಗರದ ಪೊಲೀಸ್ ಠಾಣೆಗೆ ಮೊಸಳೆ ನುಗ್ಗಿದ್ದಲ್ಲದೇ ಅಲ್ಲೇ ಠಿಕಾಣಿ ಹೂಡಿತ್ತು. ನಾಲ್ಕು ಅಡಿ ಉದ್ದದ ಮೊಸಳೆ ನೋಡಿದ 12 ಜನ ಪೊಲೀಸರು ಭಯಪಟ್ಟು ಠಾಣೆಯಿಂದ ಹೊರ ಓಡಿದ್ದಾರೆ. ಬಳಿಕ ಪೊಲೀಸರು ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಮೊಸಳೆ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟರು.