ಅರ್ಜುನ್ ಪ್ರಶಸ್ತಿ ಸ್ವೀಕರಿಸಿದ ಕನ್ನಡಿಗ ಸುಹಾಸ್ ಯತಿರಾಜ್, ಕ್ರಿಕೆಟಿಗ ಶಿಖರ್ ಧವನ್ - ಶಿಖರ್ ಧವನ್ ಅರ್ಜುನ್ ಅವಾರ್ಡ್
ನವದೆಹಲಿ : ಪ್ಯಾರಾಲಿಂಪಿಕ್ಸ್(Paralympics)ನಲ್ಲಿ ಬೆಳ್ಳಿ ಗೆದ್ದ ಕನ್ನಡಿಗ ಐಎಎಸ್ ಅಧಿಕಾರಿ ಸುಹಾಸ್ ಯತಿರಾಜ್( IAS officer Suhas Yathiraj) ಇಂದು ಅರ್ಜುನ್ ಪ್ರಶಸ್ತಿ(Arjun Award) ಸ್ವೀಕಾರ ಮಾಡಿದರು. ಪ್ಯಾರಾಲಿಂಪಿಕ್ಸ್ನ(Para badminton) ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಸುಹಾಸ್(suhas yathiraj) ಮೂಲತಃ ಹಾಸನದವರಾದ್ರೂ ಹುಟ್ಟಿ ಬೆಳೆದಿರುವುದು ಮಾತ್ರ ಶಿವಮೊಗ್ಗದಲ್ಲಿ. 38 ವರ್ಷದ ಸುಹಾಸ್ ಸದ್ಯ ಉತ್ತರ ಪ್ರದೇಶದ ಗೌತಮ್ ಬುದ್ಧ ನಗರದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಟೀಂ ಇಂಡಿಯಾದ ಆರಂಭಿಕ ಎಡಗೈ ಬ್ಯಾಟರ್ ಶಿಖರ್ ಧವನ್(Shikhar Dhawan ) ಕೂಡ ಅರ್ಜುನ್ ಪ್ರಶಸ್ತಿ ಸ್ವೀಕಾರ ಮಾಡಿದರು. ಭಾರತೀಯ ಕ್ರಿಕೆಟ್(Indian Cricket)ನಲ್ಲಿ ವಿಭಿನ್ನವಾದ ಛಾಪು ಮೂಡಿಸಿರುವ ಗಬ್ಬರ್ ಸಿಂಗ್ ಮಹತ್ವದ ಪಂದ್ಯಗಳಲ್ಲಿ ಭಾರತಕ್ಕೆ ಜಯದ ಕಾಣಿಕೆ ನೀಡಿದ್ದಾರೆ..