ಗೋಮೂತ್ರ ಹಾಗೂ ಸಗಣಿ ಕೊರೊನಾ ಗುಣಪಡಿಸುವಲ್ಲಿ ಸಹಾಯಕ: ಬಿಜೆಪಿ ಶಾಸಕಿ - ಅಸ್ಸೋಂ ಬಿಜೆಪಿ ಶಾಸಕಿ ಸುಮನ್ ಹರಿಪ್ರಿಯಾ
ಸಾವಿರಾರು ಜೀವಗಳನ್ನು ಬಲಿ ಪಡೆದು, ಕೋಟ್ಯಂತರ ಜನರಲ್ಲಿ ಆತಂಕ ಮೂಡಿಸಿರುವ ಮಾರಣಾಂತಿಕ ಕೊರೊನಾ ವೈರಸ್ಗೆ ಔಷಧ ಕಂಡುಹಿಡಿಯಲು ಜಗತ್ತಿನ ವೈದ್ಯರು ಚಿಂತಿಸುತ್ತಿದ್ದಾರೆ. ಈ ನಡುವೆ ಅಸ್ಸೋಂನ ಬಿಜೆಪಿ ಶಾಸಕಿಯೊಬ್ಬರು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಬಿಜೆಪಿ ಶಾಸಕಿ ಸುಮನ್ ಹರಿಪ್ರಿಯಾ, ಸಗಣಿ ಹಾಗೂ ಗೋಮೂತ್ರ, ಮಾರಕ ಕೊರೊನಾ ವೈರಸ್ ಹಾಗೂ ಕ್ಯಾನ್ಸರ್ ಗುಣಪಡಿಸುವಲ್ಲಿ ಸಹಕಾರಿ ಎಂದು ಹೇಳಿದ್ದಾರೆ. "ಹಸುವಿನ ಸಗಣಿ ತುಂಬಾ ಸಹಾಯಕ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಅಂತೆಯೇ, ಗೋಮೂತ್ರವನ್ನು ಸಿಂಪಡಿಸಿದರೆ, ಆ ಪ್ರದೇಶವನ್ನು ಅದು ಶುದ್ಧೀಕರಿಸುತ್ತದೆ. ಕೊರೊನಾ ವೈರಸ್ ಗುಣಪಡಿಸುವಲ್ಲಿ ಈ ಗೋಮುತ್ರ ಹಾಗೂ ಸಗಣಿ ಇದೇ ರೀತಿ ಮಾಡಬಹುದೆಂದು ನಾನು ನಂಬುತ್ತೇನೆ ಎಂದು ಹರಿಪ್ರಿಯಾ ಹೇಳಿದ್ದಾರೆ.
Last Updated : Mar 3, 2020, 3:38 PM IST