ಮಹಿಳೆಯರು ಮತ್ತು ಬಾಲಕನ ಮೇಲೆ ಹಸು ದಾಳಿ : ವಿಡಿಯೋ - ಕುರುಕ್ಷೇತ್ರದಲ್ಲಿ ಹಸು ದಾಳಿ
ಕುರುಕ್ಷೇತ್ರ: ಇಲ್ಲಿನ ಥನೇಸರ್ ನಗರದಲ್ಲಿ ಬೀದಿ ಹಸುಗಳ ಕಾಟ ಹೆಚ್ಚಾಗಿದ್ದು, ರಸ್ತೆಯಲ್ಲಿ ಓಡಾಡುವ ಜನರ ಮೇಲೆ ಅದಾಳಿ ಮಾಡುತ್ತಿವೆ. ಅಂತಹದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬೀದಿ ಹಸುವೊಂದು ಸೈಕಲ್ನಲ್ಲಿ ಹೋಗುತ್ತಿದ್ದ ಬಾಲಕನ ಮೇಲೆ ಏಕಾಏಕಿ ನುಗ್ಗಿ ಬಂದಿದೆ. ಇದನ್ನು ಕಂಡ ಬಾಲಕನ ತಾಯಿ ಕಾಪಾಡಲು ಬಂದಿದ್ದಾರೆ. ಈ ವೇಳೆ ಹಸು ಅವರ ಮೇಲೂ ಅಟ್ಟಹಾಸ ಮೆರೆದಿದೆ. 40 ಸೆಕೆಂಡುಗಳಲ್ಲಿ 56 ಕ್ಕೂ ಹೆಚ್ಚು ಬಾರಿ ದಾಳಿ ಮಾಡಿದೆ. ದಾಳಿಯಲ್ಲಿ ಇಬ್ಬರು ಮಹಿಳೆಯರು ಹಾಗೂ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.