ಹಿರಿಯರ ವಿರೋಧದ ನಡುವೆಯೂ ಪ್ರೇಮ ವಿವಾಹ : ಕೈಹಿಡಿದ ಒಂದೇ ಗಂಟೆಯಲ್ಲಿ ಬೇರೆಯಾಯ್ತು ಜೋಡಿ - ಹಿರಿಯರ ವಿರೋಧದ ನಡುವೆಯೂ ಪ್ರೇಮ ವಿವಾಹ
ಮತಗಳು ಬೇರೆಯಾದ್ರೂ ಮನಸ್ಸುಗಳು ಒಂದಾದವು. ಇವರ ಪ್ರೇಮಕ್ಕೆ ಕುಟುಂಬಸ್ಥರೇ ಅಡ್ಡಿ ಪಡಿಸಿದ್ರೂ ಅವೆಲ್ಲವನ್ನೂ ದಾಟಿ ಪ್ರೇಮ ವಿವಾಹ ಮಾಡಿಕೊಂಡರು. ಆದರೆ, ಮದುವೆಯಾಗಿ ಕೇವಲ ಒಂದೇ ಗಂಟೆಯಲ್ಲಿ ಇಬ್ಬರು ದೂರವಾಗಿದ್ದಾರೆ. ಇಂತಹದೊಂದು ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಫಿರಂಗಿಪುರಂ ತಾಲೂಕಿನ ಕಂಡ್ರಿಗ ನಿವಾಸಿ ಚಂದು ಎಂಬಾತ ಚೆತಪೂಡಿ ನಿವಾಸಿ ಕಾಸರ್ ಎಂಬಾಕೆಯನ್ನು ಕಳೆದ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ. ಈ ವಿಷಯ ಕುಟುಂಬಸ್ಥರಿಗೆ ತಿಳಿದಿದ್ದು, ಇವರ ಪ್ರೇಮ ವಿವಾಹಕ್ಕೆ ನಿರಾಕರಿಸಿದ್ದಾರೆ. ನವದಂಪತಿ ಪೊಲೀಸ್ ಠಾಣೆಯಿಂದ ಆಟೋದಲ್ಲಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಯುವತಿ ಕಡೆಯವರು ಯುವಕನ ಮೇಲೆ ದಾಳಿ ಮಾಡಿದ್ದಾರೆ. ಬಳಿಕ ಯುವತಿಯನ್ನು ಬಲವಂತವಾಗಿ ಬೈಕ್ ಮೇಲೆ ಕರೆದೊಯ್ದಿದ್ದಾರೆ. ಈ ಘಟನೆ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಚಂದು ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.