ಕೋವಿಡ್ ಮೂರು ಮತ್ತು ನಾಲ್ಕನೇ ಅಲೆ ನಿಭಾಯಿಸಲು ಸಜ್ಜಾಗಿ; ಡಾ. ಸುದೀಪ್ ಸಿಂಗ್ - ಎನ್‌ಸಿಡಿಸಿ ನಿರ್ದೇಶಕ ಡಾ.ಸುದೀಪ್ ಸಿಂಗ್ ಸಂದರ್ಶನ
ಹೈದರಾಬಾದ್: ಇತ್ತೀಚೆಗೆ ಕೆಲ ದಿನಗಳಿಂದ ಕೋವಿಡ್ ಪ್ರಕರಣಗಳ ಸಂಖ್ಯೆ ಎಲ್ಲೆಡೆ ಹೆಚ್ಚಾಗುತ್ತಿದ್ದು, ಈ ಸಂಬಂಧ ಈಟಿವಿ ಭಾರತ, ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ (ಎನ್‌ಸಿಡಿಸಿ) ನಿರ್ದೇಶಕ ಡಾ. ಸುದೀಪ್ ಸಿಂಗ್ ಅವರೊಂದಿಗೆ ವಿಶೇಷ ಸಂದರ್ಶನ ಮಾಡಿದೆ. ಕೊರೊನಾದ ಮೂರು ಮತ್ತು ನಾಲ್ಕನೇ ಅಲೆಯನ್ನು ನಿಯಂತ್ರಿಸಲು ದೇಶ ಸಿದ್ಧವಾಗಬೇಕು. ಜನರು ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇಲ್ಲದಿದ್ದರೆ ದೇಶದಲ್ಲಿ ಮತ್ತೆ ಕೊರೊನಾ ಪ್ರಕರಣಗಳು ಹೆಚ್ಚಾಗುವುದು ಖಂಡಿತ. ಹಾಗಾಗಿ ಎಚ್ಚರಿಕೆಯಿಂದ ಇರಬೇಕೆಂದು ಕಿವಿ ಮಾತು ಹೇಳಿದರು.