ಕೊರೊನಾ ಸೋಂಕಿತ ವ್ಯಕ್ತಿಯಿಂದ ಸರ್ಕಾರಿ ಮೆಡಿಕಲ್ ಸಿಬ್ಬಂದಿ ಮೇಲೆ ದಾಳಿ... ವಿಡಿಯೋ
ಕರ್ನೂಲ್ (ಆಂಧ್ರ ಪ್ರದೇಶ): ಕೊರೊನಾ ಸೋಂಕಿತ ವ್ಯಕ್ತಿಯೋರ್ವ ಸರ್ಕಾರಿ ಮೆಡಿಕಲ್ ಸಿಬ್ಬಂದಿ ಮೇಲೆ ದಾಳಿ ನಡೆಸಿರುವ ಘಟನೆ ನಡೆದಿದೆ. ಆಂಧ್ರಪ್ರದೇಶದ ಕರ್ನೂಲ್ನಲ್ಲಿ ಈ ಘಟನೆ ನಡೆದಿದ್ದು, ಹೋಂ ಕ್ವಾರಂಟೈನ್ಗೊಳಗಾಗಿದ್ದ ವ್ಯಕ್ತಿ ಕಲ್ಲುಗಳಿಂದ ದಾಳಿ ನಡೆಸಿದ್ದಾನೆ. ಈ ವೇಳೆ ಮಧ್ಯಪ್ರವೇಶ ಮಾಡಿದ ಸರ್ಕಾರಿ ಮೆಡಿಕಲ್ ಸಿಬ್ಬಂದಿ ಪತಿ ಮೇಲೂ ಆತ ದಾಳಿ ನಡೆಸಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ಇದೀಗ ಪ್ರಕರಣ ದಾಖಲು ಮಾಡಲಾಗಿದೆ.