ರಾಹುಲ್ ಗಾಂಧಿ ತಂದೆ ಹತ್ಯೆ ಬಗ್ಗೆ ವಿದ್ಯಾರ್ಥಿನಿ ಪ್ರಶ್ನೆ... ರಾಗಾ ಉತ್ತರಿಸಿದ್ದು ಹೀಗೆ! - ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ
ಪುದುಚೇರಿ: ವಿದ್ಯಾರ್ಥಿಗಳೊಂದಿಗಿನ ಸಂವಾದ ಕಾರ್ಯಕ್ರಮವೊಂದರಲ್ಲಿ ರಾಹುಲ್ ಗಾಂಧಿ ಅವರ ತಂದೆ ಹತ್ಯೆ ಬಗ್ಗೆ ಪ್ರಶ್ನೆ ಮಾಡಲಾಗಿದ್ದು, ಅದಕ್ಕೆ ರಾಹುಲ್ ಗಾಂಧಿ ಉತ್ತರ ನೀಡಿದ್ದಾರೆ. ವಿದ್ಯಾರ್ಥಿನಿಯೋರ್ವಳು ನಿಮ್ಮ ತಂದೆಯನ್ನು ಎಲ್ಟಿಟಿ ಉಗ್ರರು ಹತ್ಯೆಗೈಯ್ದಿದ್ದು, ಅವರ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರ ನೀಡಿದ ರಾಹುಲ್ ಗಾಂಧಿ, ನನಗೆ ಯಾರ ಬಗ್ಗೆ ಕೋಪ ಅಥವಾ ದ್ವೇಷವಿಲ್ಲ. ನನ್ನ ತಂದೆಯನ್ನು ಕಳೆದುಕೊಂಡೆ ಮತ್ತು ಅದು ನನಗೆ ಕಷ್ಟದ ಸಮಯವಾಗಿತ್ತು. ಜತೆಗೆ ತುಂಬಾ ನೋವುಂಟು ಮಾಡಿದೆ ಎಂದಿದ್ದಾರೆ.