ಚೀನಾ ಸೈನಿಕರನ್ನು ಎದುರಿಸಲು ನಮ್ಮ ಯೋಧರನ್ನ ನಿರಾಯುಧರಾಗಿ ಏಕೆ ಕಳುಹಿಸಿದ್ದೀರಿ!? ಪ್ರಿಯಾಂಕಾ!
ನವದೆಹಲಿ: ಗಲ್ವಾನ್ ವ್ಯಾಲಿಯಲ್ಲಿ ಭಾರತ-ಚೀನಾ ನಡುವಿನ ಸಂಘರ್ಷದ ವೇಳೆ ನಮ್ಮ 20 ಯೋಧರು ಹುತಾತ್ಮರಾಗಿದ್ದಾರೆ. ಲಡಾಕ್ನಲ್ಲಿ ವೀರ ಮರಣವನ್ನಪ್ಪಿದ ಯೋಧರಿಗೆ ಇಂದು ಕಾಂಗ್ರೆಸ್ ಶ್ರದ್ಧಾಂಜಲಿ ಸಲ್ಲಿಕೆ ಮಾಡಿತು. ಈ ವೇಳೆ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಚೀನಾದ ಸೈನಿಕರನ್ನು ಎದುರಿಸಲು ನೀವು(ಪ್ರಧಾನಿ) ನಿರಾಯುಧರಾಗಿ ನಮ್ಮ ಸೈನಿಕರನ್ನು ಏಕೆ ಕಳುಹಿಸಿದ್ದೀರಿ. ಭಾರತದ ಜನತೆಗೆ ಇದು ಗೊತ್ತಾಗಬೇಕು. ಅವರು ಪ್ರಾಣ ಕಳೆದುಕೊಂಡಿರುವ ಭೂಮಿ ನಮ್ಮದು. ನಮ್ಮ ಭೂಮಿಯನ್ನ ಚೀನಾಕ್ಕೆ ನೀಡಲು ನಿಮಗೆ ನಾವು ಬಿಡುವುದಿಲ್ಲ. ನಾವು ಕೇಳಿರುವ ಪ್ರಶ್ನೆಗಳಿಗೆ ಪ್ರಧಾನಿ ಮೋದಿ ಉತ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.