ನಿಮ್ಮಲ್ಲಿ ಸಮರ್ಥರಿಲ್ಲವಾದ್ರೆ ಹೇಳಿ, ಬಿಜೆಪಿ ಕಾರ್ಯಕರ್ತನ ಕಳಿಸ್ತೀವಿ ಎಂದ ಉಮಾ ಭಾರತಿ! - ಬಿಜೆಪಿ ಮುಖಂಡೆ ಉಮಾ ಭಾರತಿ
ನವದೆಹಲಿ: ನಿಮ್ಮಲ್ಲಿ ಪಕ್ಷ ಮುನ್ನಡೆಸುವ ಸಮರ್ಥರು ಇಲ್ಲವಾದರೆ ಹೇಳಿ, ಬಿಜೆಪಿ ಪಕ್ಷದ ಕಾರ್ಯಕರ್ತನನ್ನು ಕಳುಹಿಸಿಕೊಡುತ್ತೇವೆ ಎಂದು ಉಮಾ ಭಾರತಿ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿನ ಬಿಕ್ಕಟ್ಟಿನ ವಿಚಾರವಾಗಿ ಮಾತನಾಡಿರುವ ಅವರು, ದೇಶದಲ್ಲಿ 'ಕೈ' ಸಂಪೂರ್ಣವಾಗಿ ಅಂತ್ಯವಾಗಿದ್ದು, ಯಾವುದೇ ಸಮರ್ಥರು ಅದರಲ್ಲಿ ಇಲ್ಲ ಎಂದಿದ್ದಾರೆ. ಗಾಂಧಿ-ನೆಹರೂ ಕುಟುಂಬದ ಅಸ್ತಿತ್ವವು ಸದ್ಯ ಬಿಕ್ಕಟ್ಟಿನಲ್ಲಿದೆ, ಅವರ ರಾಜಕೀಯ ಪ್ರಾಬಲ್ಯ ಮುಗಿದು ಹೋಗಿದೆ. ಕಾಂಗ್ರೆಸ್ ವಿದೇಶಿ ಬದಲಿಗೆ ನಿಜವಾದ ಸ್ವದೇಶಿ ಗಾಂಧಿಯವರಾಗಬೇಕು ಎಂದಿದ್ದಾರೆ.