ಬ್ಯಾಂಕ್ ಶಾಖೆಗೆ ಬಂದ ನಾಗಪ್ಪ... ಹರಸಾಹಸ ಪಟ್ಟು ಸೆರೆ ಹಿಡಿದ ಅರಣ್ಯ ಸಿಬ್ಬಂದಿ! - ಹಿಮಾಚಲ ಪ್ರದೇಶ ಸುದ್ದಿ
ಕಂಗ್ರಾ(ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿನ ಎಸ್ಬಿಐ ಬ್ಯಾಂಕ್ ಶಾಖೆಗೆ ನಾಗರಹಾವು ಲಗ್ಗೆ ಹಾಕಿದ್ದರಿಂದ ಸರಿ ಸಮಾರು ಮೂರು ಗಂಟೆಗಳ ಕಾಲ ಕೆಲಸ ನಿಂತು ಹೋಯಿತು. ಬ್ಯಾಂಕ್ ಮ್ಯಾನೇಜರ್ ಕಂಪ್ಯೂಟರ್ ಟೇಬಲ್ ಅಡಿಯಲ್ಲಿ ಹಾವು ಅಡಗಿ ಕುಳಿತ್ತಿದ್ದರಿಂದ ಹೊರತೆಗೆಯಲು ಹರಸಾಹಸ ಪಡಲಾಯಿತು. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಏಳು ಅಡಿ ಉದ್ದದ ನಾಗರಹಾವು ಹಿಡಿದು ಕಾಡಿಗೆ ಬಿಡುವಲ್ಲಿ ಯಶಸ್ವಿಯಾದರು.
Last Updated : Sep 2, 2020, 6:28 PM IST