ಈಟಿವಿ ಭಾರತದೊಂದಿಗೆ ಉತ್ತರಾಖಂಡ ಸಿಎಂ: ಚಮೋಲಿ ದುರಂತದ ಬಗ್ಗೆ ಮಾಹಿತಿ - ತ್ರಿವೇಂದ್ರ ಸಿಂಗ್ ರಾವತ್
ಚಮೋಲಿ: ಹಿಮಪ್ರವಾಹದಿಂದಾಗಿ ಹಾನಿಗೊಳಗಾದ ಉತ್ತರಾಖಂಡದ ಚಮೋಲಿಯ ಸ್ಥಳಗಳ ವೈಮಾನಿಕ ಸಮೀಕ್ಷೆ ನಡೆಸಿದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್, ಈಟಿವಿ ಭಾರತದೊಂದಿಗೆ ಮಾತನಾಡಿದ್ದಾರೆ. ಕೇಂದ್ರ ಹಾಗೂ ರಾಜ್ಯದ ರಕ್ಷಣಾ ತಂಡಗಳು ಮೂರು ದಿನಗಳಿಂದ ಕಾರ್ಯಾಚರಣೆಯಲ್ಲಿ ತೊಡಗಿವೆ. ಜನರನ್ನು ರಕ್ಷಿಸುವುದು ನಮ್ಮ ಆದ್ಯತೆಯಾಗಿದೆ. ಕೇಂದ್ರ ಸರ್ಕಾರವು ಕೆಲವು ವಿಜ್ಞಾನಿಗಳನ್ನು ಇಲ್ಲಿಗೆ ಕಳುಹಿಸಿದೆ. ಇವರು ಅಧ್ಯಯನ ಮಾಡಿ ಅವಘಡಕ್ಕೆ ಕಾರಣ ತಿಳಿಸುತ್ತಾರೆ. ಭವಿಷ್ಯದಲ್ಲಿ ಇಂತಹ ದುರಂತ ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಕೂಡ ಚರ್ಚಿಸಲಾಗುತ್ತಿದೆ ಎಂದು ಸಿಎಂ ಹೇಳಿದರು.