ದೆಹಲಿಯಲ್ಲಿ 'ಕಾವೇರಿ' ಕರ್ನಾಟಕ ಭವನಕ್ಕೆ ಸಿಎಂ ಬಿಎಸ್ವೈ ಶಿಲಾನ್ಯಾಸ
ನವದೆಹಲಿ: ಕಾವೇರಿ ಕರ್ನಾಟಕ ಭವನ ನಿರ್ಮಾಣಕ್ಕೆ ಸಿಎಂ ಬಿ. ಎಸ್. ಯಡಿಯೂರಪ್ಪ ಭೂಮಿ ಪೂಜೆ ನೆರವೇರಿಸಿದರು. ಮುಖ್ಯಮಂತ್ರಿ ಬಿಎಸ್ವೈ ಜತೆಗೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಮತ್ತು ಡಿ.ವಿ. ಸದಾನಂದ ಗೌಡ ಕೂಡ ಪೂಜೆ ಕೈಗೊಂಡರು. ಕಟ್ಟಡದ ಹಿಂದಿನ ಅಂದಾಜು ವೆಚ್ಚ 82 ಕೋಟಿ ರೂಪಾಯಿ ಆಗಿದೆ. ಈ ಕಟ್ಟಡ ನಿರ್ಮಾಣಕ್ಕೆ 2019ರಲ್ಲೇ ಭೂಮಿ ಪೂಜೆ ನೆರವೇರಿಸಲಾಗಿತ್ತು. ಆದರೆ, ಇದೀಗ ಬಿಜೆಪಿ ಸರ್ಕಾರ ಹೊಸ ವಿನ್ಯಾಸ ಸಿದ್ಧಪಡಿಸಿದ್ದು, ಸುಮಾರು 120 ಕೋಟಿ ರೂಪಾಯಿ ವೆಚ್ಚದಲ್ಲಿ ಕರ್ನಾಟಕ ಭವನ-1 (ಕಾವೇರಿ) ನಿರ್ಮಾಣವಾಗಲಿದೆ.