ಜಗನ್ನಾಥನ ವಾರ್ಷಿಕ ರಥಯಾತ್ರೆಗೆ ಸರ್ಕಾರದ ಸಮ್ಮತಿ: ಇಂದಿನಿಂದ ರಥ ತಯಾರಿಕೆ ಕಾರ್ಯ ಆರಂಭ - ಲಾಕ್ಡೌನ್
ಒಡಿಶಾದ ಪುರಿ ಜಗನ್ನಾಥನ ವಾರ್ಷಿಕ ರಥಯಾತ್ರೆಗೆ ರಥಗಳ ನಿರ್ಮಾಣಕ್ಕೆ ಕೇಂದ್ರ ಗೃಹ ಸಚಿವಾಲಯ ಅನುಮತಿ ನೀಡಿದೆ. ಸರ್ಕಾರವು ರಥಯಾತ್ರೆ ನಡೆಸುವ ಕುರಿತು ನಿರ್ಧಾರ ತೆಗೆದುಕೊಳ್ಳಲಿದೆ. ಲಾಕ್ಡೌನ್ ಹಿನ್ನೆಲೆ ಕೆಲವು ನಿಬಂಧನೆಗಳನ್ನ ವಿಧಿಸಲಾಗಿದ್ದು, ಅವುಗಳನ್ನು ಗಮನದಲ್ಲಿಟ್ಟುಕೊಂಡು ರಥಗಳ ನಿರ್ಮಾಣ ಮಾಡಲು ಅನುಮತಿ ಇದೆ ಎಂದು ಕಾರ್ಯದರ್ಶಿ ತಿಳಿಸಿದ್ದಾರೆ.