ಕ್ವಾರಂಟೈನ್‌ನಿಂದ ಹೊರಬಂದ ಕೇದಾರನಾಥ: ಮೋದಿ ಹೆಸರಲ್ಲಿ ಮೊದಲ ಪ್ರಾರ್ಥನೆ - ಉತ್ತರಾಖಂಡದ ಕೇದಾರನಾಥ ದೇವಸ್ಥಾನ
ರುದ್ರಪ್ರಯಾಗ್(ಉತ್ತರಾಖಂಡ): ಕೋಟ್ಯಂತರ ಭಕ್ತ ಸಮೂಹ ಹೊಂದಿರುವ ಉತ್ತರಾಖಂಡದ ಪುರಾಣ ಪ್ರಸಿದ್ಧ ಕೇದಾರನಾಥ ದೇಗುಲದ ಬಾಗಿಲನ್ನು ಮಂಗಳ ಮಂತ್ರ ಘೋಷಗಳೊಂದಿಗೆ ಇಂದು ತೆರೆಯಲಾಯಿತು. ಭಕ್ತರ ಅನುಪಸ್ಥಿತಿಯಲ್ಲಿ ಶುಭ ಮುಂಜಾನೆ 6.10ಕ್ಕೆ ಮಾಹಾದ್ವಾರ ತೆರೆದುಕೊಂಡಿತು. ಕೊರೊನಾ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಭಕ್ತರ ದರ್ಶನಕ್ಕೆ ಅವಕಾಶ ನೀಡಿಲ್ಲ. ಹಿಮಾಲಯದ ತಪ್ಪಲಿನ ಸುಂದರ ಪ್ರಕೃತಿಯ ಮಡಿಲಲ್ಲಿರುವ ಶಿವನಿಗೆ ಮುಖ್ಯ ಅರ್ಚಕರ ತಂಡ ಮಾತ್ರ ವಿಶೇಷ ಪೂಜೆ ಸಲ್ಲಿಸಿದೆ. ವಿಶೇಷ ಅಂದರೆ ಗಂಗೋತ್ರಿ ಮತ್ತು ಯಮುನೋತ್ರಿಯಂತೆ ಕೇದಾರನಾಥದಲ್ಲೂ ಮೊದಲ ಪ್ರಾರ್ಥನೆಯನ್ನು ಪ್ರಧಾನಿ ಮೋದಿ ಹೆಸರಲ್ಲಿ ಮಾಡಲಾಗಿದೆ.
Last Updated : Apr 29, 2020, 12:39 PM IST