ಸರಗಳ್ಳರಿಗೆ ಸಾರ್ವಜನಿಕರಿಂದ ಸಖತ್ ಗೂಸಾ..! ವಿಡಿಯೋ
ಬೈಕ್ನಲ್ಲಿ ಬಂದ ಸರಗಳ್ಳರು ಮಹಿಳೆಯ ಕುತ್ತಿಗೆಯಿಂದ ಸರವನ್ನು ಎಳೆಯುವಾಗ ಸಿಕ್ಕಿಬಿದ್ದು ಸಾರ್ವಜನಿಕರಿಂದ ಗೂಸಾ ತಿಂದ ಘಟನೆ ದೆಹಲಿಯ ನಂಗೊಲಿ ಪ್ರದೇಶದಲ್ಲಿ ಮಂಗಳವಾರ ನಡೆದಿದೆ. ಚೈನ್ ಎಳೆಯುವ ವೇಳೆ ಹಿಂಬದಿ ಸವಾರ ಸಿಕ್ಕಿಬಿದ್ದಿದ್ದಾನೆ. ಸಾರ್ವಜನಿಕರು ಧರ್ಮದೇಟು ನೀಡಿದ ಬಳಿಕ ಸರಗಳ್ಳರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.