ಕಟ್ಟಡದ ಮೇಲಿಂದ ಬಿದ್ದು ವಿವಾಹಿತೆ ಆತ್ಮಹತ್ಯೆ... ಸಿಸಿಟಿವಿಯಲ್ಲಿ ದೃಶ್ಯ ಸೆರೆ - ಆತ್ಮಹತ್ಯೆ ಮಾಡಿಕೊಂಡ ಮಹಿಳೆ
ಸೇಲಂ: ವಿವಾಹಿತೆಯೋರ್ವಳು ಕಟ್ಟಡದ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಸೇಲಂನಲ್ಲಿ ನಡೆದಿದೆ. ಮಾನಸಿಕ ತೊಂದರೆಯಿಂದ ಬಳಲುತ್ತಿದ್ದ 40 ವರ್ಷದ ವಿಠೇಶ್ವರಿ ಇಲ್ಲಿನ ರಾಮಕೃಷ್ಣ ನಗರದಲ್ಲಿ ಪತಿ ಷಣ್ಮುಗ ಸುಂದರ್ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದರು. ಆದರೆ ಕಟ್ಟಡದ ನಾಲ್ಕನೇ ಮಹಡಿಯಿಂದ ಹಾರಿಬಿದ್ದು ಸಾವನ್ನಪ್ಪಿದ್ದು, ಮಾನಸಿಕ ತೊಂದರೆ ಇದ್ದ ಕಾರಣ ಅವರು ಈ ರೀತಿಯಾಗಿ ನಡೆದುಕೊಂಡಿದ್ದಾರೆಂದು ಹೇಳಲಾಗುತ್ತಿದೆ.
Last Updated : Sep 20, 2020, 9:07 AM IST