ಮಳೆಯಿಂದ ಭೂಕುಸಿತ.. ನೋಡ ನೋಡುತ್ತಿದ್ದಂತೆ ಗುಂಡಿಯೊಳಗೆ ಮುಳುಗಿದ ಕಾರು.. ವಿಡಿಯೋ - ಬಾವಿಯಲ್ಲಿ ಮುಳುಗಿದ ಕಾರುೠ
ಮುಂಬೈ : ಮಹಾನಗರಿಯಲ್ಲಿ ಬುಧವಾರದಿಂದ ಮಳೆಯಾರ್ಭಟ ಮುಂದುವರಿದಿದೆ. ಹಲವೆಡೆ ಭೂಕುಸಿತ ಸಂಭವಿಸಿದೆ. ಆದರೆ, ಇಲ್ಲಿನ ಘಾಟ್ಕೋಪರ್ ಬಳಿಯ ರಾಮ್ನಿವಾಸ್ ಸೊಸೈಟಿ ಬಳಿ ಪಾರ್ಕ್ ಮಾಡಿದ್ದ ಕಾರೊಂದು ಮಳೆಯಿಂದ ಸೃಷ್ಟಿಯಾದ ಗುಂಡಿಯೊಳಗೆ ಮುಳುಗಿದೆ. ಕೆಲ ವರ್ಷಗಳ ಹಿಂದೆ ಈ ಜಾಗದಲ್ಲಿ ಬೃಹತ್ ಬಾವಿಯಾಕಾರದಲ್ಲಿ ಸಿಂಕ್ ಹೋಲ್ ನಿರ್ಮಾಣವಾಗಿತ್ತು ಎನ್ನಲಾಗಿದೆ. ಬಳಿಕ ಅದನ್ನು ಸಿಮೆಂಟ್ ಮೂಲಕ ಮುಚ್ಚಲಾಗಿತ್ತು. ಇದೀಗ ಭಾರೀ ಮಳೆಯಾಗುತ್ತಿರುವ ಬೆನ್ನಲ್ಲೆ ಸಿಮೆಂಟ್ ಕುಸಿದು ಮೇಲೆ ನಿಲ್ಲಿಸಿದ್ದ ಕಾರು ಮುಳುಗಿದೆ. ಘಟನೆಯಲ್ಲಿ ಯಾರೊಬ್ಬರು ಗಾಯಗೊಂಡಿಲ್ಲ. ಆದರೆ, ಕಾರು ಸಂಪೂರ್ಣ ಗುಂಡಿಯೊಳಗೆ ಮುಳುಗಿದೆ. ಮುಂಬೈ ಮಳೆಗೆ ಈವರೆಗೆ 13 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.