ಹೈದರಾಬಾದ್-ಬೆಂಗಳೂರು ಬಸ್ ಪಲ್ಟಿ, 10 ಜನರಿಗೆ ಗಾಯ... ವಾಹನ ತೆರವು ವೇಳೆ ಕ್ರೇನೂ ಪಲ್ಟಿ! - ರಂಗಾರೆಡ್ಡಿ ಬಸ್ ಪಲ್ಟಿ ಸುದ್ದಿ
ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಮದನಪಲ್ಲಿ ಗ್ರಾಮದ ಬಳಿ ರಸ್ತೆ ಅಪಘಾತ ಸಂಭವಿಸಿದೆ. ಹೈದರಾಬಾದ್ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಪಲ್ಟಿಯಾಗಿ 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇಬ್ಬರು ಸ್ಥಿತಿ ಚಿಂತಾಜನಕವಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ನಡುರಸ್ತೆಯಲ್ಲೇ ಬಿದ್ದ ಬಸ್ ತೆರವಿಗೆ ಬಂದ ಕ್ರೇನ್ ಸಹ ಪಲ್ಟಿಯಾಗಿತ್ತು. ಬಳಿಕ ಮತ್ತೊಂದು ಕ್ರೇನ್ ಸಹಾಯದಿಂದ ಎರಡು ವಾಹನಗಳನ್ನು ತೆರವುಗೊಳಿಸಲಾಯಿತು. ಇನ್ನು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್ ಜಾಮ್ ಆಗಿದ್ದು, ಪೊಲೀಸರು ಸುಗಮ ಸಂಚಾರ ಅನುವು ಮಾಡಲು ಹರಸಾಹಸ ಪಡುತ್ತಿದ್ದಾರೆ.