ನದಿ ದಾಟಲು ಹರಸಾಹಸ: ಇದು ಚಮೋಲಿ ಜನರ ಸಂಕಷ್ಟ - ಚಮೋಲಿ
ಥಾರಾಲಿ: ಚಮೋಲಿ ಜಿಲ್ಲೆಯ ಥಾರಾಲಿ ಡೆವಲಪ್‌ಮೆಂಟ್ ಬ್ಲಾಕ್‌ನ ಸೋಲ್ ವ್ಯಾಲಿಯ ಧಾದರ್‌ಬಗಡ್‌ನಲ್ಲಿ ಸೇತುವೆ ಮುರಿದು ಬಿದ್ದಿದೆ. ಈ ಕಾರಣದಿಂದ ಜನ ಹರಿಯುವ ನದಿಯಲ್ಲಿ ಹರಸಾಹಸ ಮಾಡಿ ನದಿ ದಾಟುತ್ತಿದ್ದಾರೆ. ಇಲ್ಲಿನ ಜನ ಇಷ್ಟೆಲ್ಲ ಸಂಕಷ್ಟ ಅನುಭವಿಸುತ್ತಿದ್ದರೂ ಸರ್ಕಾರ ಮಾತ್ರ ಯಾವುದೇ ಸೇತುವೆ ನಿರ್ಮಿಸಿ ಕೊಡುವ ಗೋಜಿಗೆ ಹೋಗಿಲ್ಲ. 2013ರಲ್ಲಿ ಬಂದ ಭಾರಿ ಮಳೆಗೆ ಇಲ್ಲಿದ್ದ ಏಕೈಕ ಸೇತುವೆ ಕೊಚ್ಚಿ ಹೋಗಿದೆ. ಹಲವು ಹಳ್ಳಿಗಳಿಗೆ ಇದ್ದ ಏಕೈಕ ಧಾದರ್‌ಬಗಡ್ ಸೇತುವೆ ಇಲ್ಲದ್ದರಿಂದ ಜನ ಸಂಕಷ್ಟಕ್ಕೀಡಾಗಿದ್ದಾರೆ.