ಜೋಧ್ಪುರದಲ್ಲಿ ಸೇನಾ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ - ತಾಂತ್ರಿಕ ದೋಷ ಹಿನ್ನೆಲೆ ಸೇನಾ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ
ಜೋಧ್ಪುರ: ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆ ರಾಜಸ್ಥಾನದ ಜೋಧ್ಪುರನ ಬದ್ಲಿ ಬಸ್ನಿ ಎಂಬ ಗ್ರಾಮದಲ್ಲಿ ಸೇನಾ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದೆ. ಸ್ಥಳಕ್ಕೆ ಪೊಲೀಸರು, ಗ್ರಾಮದ ಜನರು ದೌಡಾಯಿಸಿದ್ದಾರೆ. ಕೆಲ ನಿಮಿಷಗಳ ಬಳಿಕ ಅಲ್ಲಿದೆ ತಾಂತ್ರಿಕ ತಜ್ಞರು ಮತ್ತೊಂದು ಹೆಲಿಕಾಪ್ಟರ್ನಲ್ಲಿ ಬಂದಿದ್ದು, ರಿಪೇರಿ ಕೆಲಸ ಆರಂಭಿಸಿದ್ದಾರೆ.