ತಂದೆ ದೆಹಲಿ ಪ್ರತಿಭಟನೆಯಲ್ಲಿ ಭಾಗಿ... ಟ್ರ್ಯಾಕ್ಟರ್ ಚಲಾಯಿಸಿ ಕೃಷಿ ಕಾಯಕಕ್ಕೆ ಹೊರಟ 'ಪಂಜಾಬ್ ಬೇಟಿ' - ಟ್ರ್ಯಾಕ್ಟರ್ ಹತ್ತಿ ಕೃಷಿ ಮಾಡಲು ಹೊರಟ 'ಪಂಜಾಬ್ ಬೇಟಿ'
ಒಂದೆಡೆ ರೈತರು ಕಳೆದ ಹಲವು ದಿನಗಳಿಂದ ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ಧರಣಿ ನಡೆಸುತ್ತಿದ್ದಾರೆ. ಮತ್ತೊಂದೆಡೆ ಅವರ ಕುಟುಂಬದ ಮಹಿಳೆಯರು ಮತ್ತು ಮಕ್ಕಳು ಮನೆಯ ಸಂಪೂರ್ಣ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ ಜಲಂಧರ್‌ನ ಕರ್ತಾರ್ಪುರ್ನ ಮನ್ಸಿತ್ ಕೌರ್ ಎಂಬ ಯುವತಿ, ತಂದೆ ದೆಹಲಿಯ ಧರಣಿಗೆ ತೆರಳಿದ ನಂತರ ಕೃಷಿಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾಳೆ. ಟ್ರ್ಯಾಕ್ಟರ್ ಚಲಾಯಿಸುವ ಮೂಲಕ ಕೃಷಿ ಚಟುವಟಿಕೆಯಲ್ಲಿ ತಲ್ಲೀನಳಾಗಿದ್ದಾಳೆ.