ಮರೆಗುಳಿ ರೋಗಕ್ಕೆ ಕಾರಣ ಏನು? ಸಂಶೋಧಕರಿಗೆ ಸಿಕ್ಕಿದೆ ಮಹತ್ವದ ಕಾರಣ!! - Alzheimer's disease
ನವದೆಹಲಿ: ಮರೆಗುಳಿ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳು ಆಗಾಗ ತಾವು ಎಲ್ಲಿದ್ದೇವೆ. ಏನು ಮಾಡುತ್ತಿದ್ದೇವೆ ಎಂಬುದನ್ನ ಗುರುತಿಸುವುದಿಲ್ಲ. ಅಷ್ಟೇ ಏಕೆ ತಮ್ಮ ವಸ್ತುಗಳನ್ನು ಎಲ್ಲಿ ಇಟ್ಟಿದ್ದಾರೆ ಎಂಬುದನ್ನು ಮರೆತು ಬಿಡುತ್ತಾರೆ. ಇನ್ನು ಆಗಾಗ್ಗೆ ಅಲೆದಾಡುವ ರೋಗಲಕ್ಷಣವನ್ನು ತೋರಿಸುತ್ತಾರೆ. ಇದು ಮೆರೆವಿನ ದುರ್ಬಲತೆಯ ಲಕ್ಷಣವಾಗಿದೆ. ಪ್ರಾದೇಶಿಕ ಮೆಮೊರಿ (ಮರೆವಿನ ರೋಗ) ದುರ್ಬಲತೆಗೆ ಕಾರಣವಾಗುವ ಮೆದುಳಿನ ಸಕ್ರಿಯ ಕಾರ್ಯವಿಧಾನದ ಬಗ್ಗೆ ಸಂಶೋಧಕರ ತಂಡ ಈಗ ಸ್ಪಷ್ಟತೆಯನ್ನು ಕಂಡುಕೊಂಡಿದೆ. ಇದಕ್ಕೆ ಕಾರಣಗಳೇನು ಎಂಬುದನ್ನ ಸಂಶೋಧಿಸಿದೆ. ಮರೆವಿನ ಕಾಯಿಲೆ ಬಗ್ಗೆ ಇಲಿಗಳ ಮೇಲೆ ಅಧ್ಯಯನ ಮಾಡಿ ಕಾರಣ ಕಂಡು ಕೊಳ್ಳಲಾಗಿದೆ. ಹಿಪೊಕ್ಯಾಂಪಸ್‌ನ ಈ ಅಡ್ಡಿ ಹೆಚ್ಚಾಗಿ ಹಿಪೊಕ್ಯಾಂಪಸ್‌ಗೆ ಮಾಹಿತಿಯನ್ನು ಪೂರೈಸುವ ಮೆದುಳಿನ ಪ್ರದೇಶವಾದ ಎಂಟೋರ್ಹಿನಲ್ ಕಾರ್ಟೆಕ್ಸ್‌ನ ಚಟುವಟಿಕೆಯ ದುರ್ಬಲತೆಯಿಂದಾಗಿ ಮರೆವಿನ ಕಾಯಿಲೆ ಬರುತ್ತದೆ ಎಂಬುದನ್ನ ಪತ್ತೆ ಹಚ್ಚಿದೆ.