ಪ್ರಾಣದೊಂದಿಗೆ ಚೆಲ್ಲಾಟ: ರೈಲು ಸಮೀಪ ಬರುತ್ತಿದ್ದಂತೆ ನೀರಿಗೆ ಜಿಗಿಯುವ ಯುವ ಪಡೆ! - ರೈಲ್ವೆ ಹಳಿ
ಪಾಟ್ನಾ: ಇಂದಿನ ಯುವಕರು ಮೋಜು-ಮಸ್ತಿ ಮಾಡುವ ನೆಪದಲ್ಲಿ ತಮ್ಮ ಪ್ರಾಣದೊಂದಿಗೂ ಚೆಲ್ಲಾಟವಾಡುತ್ತಿದ್ದಾರೆ. ಬಿಹಾರದ ಸಾರನಾದಲ್ಲಿ ಹಾದು ಹೋಗುವ ರೈಲ್ವೆ ಹಳಿ ಮೇಲೆ ನಿಂತು ಯುವಕರು ನೀರಿನ ಸೇತುವೆಗೆ ಜಿಗಿಯುತ್ತಾರೆ. ಪ್ರತಿದಿನ ಯುವಕರು ಇದೇ ರೀತಿಯ ಅಪಯಕಾರಿ ಕಸರತ್ತು ನಡೆಸುತ್ತಿದ್ದು, ಸ್ವಲ್ಪ ಯಾಮಾರಿದ್ರೂ ಸಾವು ಕಟ್ಟಿಟ್ಟ ಬುತ್ತಿ. ರೈಲು ಹಾದು ಹೋಗುವ ಹಳಿ ಕೆಳಗೆ ನೀರಿನ ಸೇತುವೆಯಿದ್ದು,ರೈಲು ಬರುತ್ತಿದ್ದಂತೆ ಯುವಕರು ಕೆಳಗೆ ಜಿಗಿಯುತ್ತಾರೆ.