ಬಂಗಾಳ ಎಲೆಕ್ಷನ್: ಕೊನೆಯ ದಿನವೂ ಬಾಂಬ್ ಸಿಡಿಸಿದ ದುಷ್ಕರ್ಮಿಗಳು - ಜೋರಸಂಕೊ ಕ್ಷೇತ್ರದ ಮಹಾಜತಿ ಸದನ್ ಸಭಾಂಗಣ
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿಂದು 8ನೇ ಹಾಗೂ ಅಂತಿಮ ಹಂತದ ಮತದಾನ ನಡೆಯುತ್ತಿದ್ದು, ಚುನಾವಣೆ ಆರಂಭದಿಂದಲೂ ರಾಜ್ಯವು ಹಿಂಸಾಚಾರಗಳಿಗೆ ಸಾಕ್ಷಿಯಾಗಿದೆ. ಇಂದು ಜೋರಸಂಕೊ ಕ್ಷೇತ್ರದ ಮಹಾಜತಿ ಸದನ್ ಸಭಾಂಗಣದ ಎದುರು ದುಷ್ಕರ್ಮಿಗಳು ಕಚ್ಛಾ ಬಾಂಬ್ ಸಿಡಿಸಿದ್ದು, ಕೇಂದ್ರ ಭದ್ರತಾ ಪಡೆ ಮತ್ತು ಕೋಲ್ಕತ್ತಾ ವಿಶೇಷ ಪೊಲೀಸರ ಪಡೆಗಳು ಸ್ಥಳದಲ್ಲಿ ಬೀಡುಬಿಟ್ಟಿವೆ. ಘಟನೆಯ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಜೋರಸಂಕೊ ಕ್ಷೇತ್ರದ ಟಿಎಂಸಿ ಅಭ್ಯರ್ಥಿ ವಿವೇಕ್ ಗುಪ್ತಾ ಆರೋಪಿಸಿದ್ದಾರೆ. ಇನ್ನು ಘಟನೆ ಬಗ್ಗೆ ವಿವರ ನೀಡುವಂತೆ ಚುನಾವಣಾ ಆಯೋಗ ಕೇಳಿದೆ.