ಮಾಸ್ಕ್ ಧರಿಸು ಎಂದಿದ್ದಕ್ಕೆ ಮಾರ್ಷಲ್ಗೆ ಹೊಡೆದ ಮಹಿಳೆ: ವಿಡಿಯೋ ವೈರಲ್ - ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳು
ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಮಾಸ್ಕ್ ಧರಿಸದೇ ಓಡಾಡುವರ ಮೇಲೆ ನಿಗಾ ಇಡುವ ಉದ್ದೇಶದಿಂದ ಮಾರ್ಷಲ್ಗಳನ್ನು ನೇಮಿಸಲಾಗಿದೆ. ಮುಂಬೈನ ಕಾಂದಿವಲಿ ಪಶ್ಚಿಮ ಮಹಾವೀರ್ ನಗರ ಲಿಂಕ್ ರಸ್ತೆಯ ಸಿಗ್ನಲ್ ಬಳಿ ಮಹಿಳೆಯಬ್ಬರು ಮಾಸ್ಕ್ ಧರಿಸದೇ ಪ್ರಯಾಣಿಸುತ್ತಿರುವುದನ್ನು ನೋಡಿದ ಬಿಎಂಸಿ ಮಹಿಳಾ ಮಾರ್ಷಲ್ 200 ರೂ.ಗಳ ದಂಡ ಕಟ್ಟುವಂತೆ ಹೇಳಿದ್ದಾರೆ. ಇದರಿಂದ ಕೋಪಗೊಂಡ ಮಹಿಳೆ ಏಕಾಏಕಿ ಮಾರ್ಷಲ್ಗೆ ಹೊಡೆದು ಗಲಾಟೆ ಮಾಡಿದ್ದಾರೆ. ಈ ಕುರಿತು ಈಗಾಗಲೇ ಮಹಿಳೆಯನ್ನು ಬಂಧಿಸಿದ್ದು, ಈ ವಿಡಿಯೋ ವೈರಲ್ ಆಗಿದೆ.