ಕತ್ತಲು ಬೆಳಕಿನ ಅಂತ್ಯವಲ್ಲ, ಆರಂಭ!: ದಾಂಪತ್ಯಕ್ಕೆ ಕಾಲಿಟ್ಟ ದಿವ್ಯಾಂಗ ಜೋಡಿ
ಅನಂತಪುರ (ಆಂಧ್ರಪ್ರದೇಶ): ಪ್ರೀತಿಗೆ ಕಣ್ಣಿಲ್ಲ ನಿಜ. ಆದರೆ ಇಲ್ಲಿ ಪ್ರೀತಿ ಮಾಡ್ತಿದ್ದ ಜೋಡಿಗೂ ದೃಷ್ಠಿ ಇರಲಿಲ್ಲ. ಇದರ ಮಧ್ಯೆ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಂಧ್ರಪ್ರದೇಶದ ಅನಂತಪುರದಲ್ಲಿ ಈ ಘಟನೆ ನಡೆದಿದೆ. ಸಾಯಿ ಕೃಷ್ಣ ಹಾಗೂ ಲಾವಣ್ಯ ಹುಟ್ಟಿನಿಂದಲೂ ಕುರುಡರು. ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಇದೀಗ ಎರಡು ಕುಟುಂಬದ ಒಪ್ಪಂದದ ಮೇಲೆ ಸರಳವಾಗಿ ಮದುವೆ ಮಾಡಿಕೊಂಡಿದ್ದಾರೆ.