ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರ: ಯಶೋಧರಾ ಸಿಂಧಿಯಾ ವಿಶ್ವಾಸ - ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು
ಭೋಪಾಲ್: ಸಿಂಧಿಯಾ ಕುಟುಂಬ ಇದೀಗ ಒಂದೇ ಪಕ್ಷದಲ್ಲಿದ್ದು, ತುಂಬಾ ಸಂತೋಷವಾಗಿದೆ. ಜ್ಯೋತಿರಾದಿತ್ಯ ಸಿಂಧಿಯಾ 'ಘರ್ ವಾಪಸಿ' ನಿಜಕ್ಕೂ ಸಂತಸದ ವಿಷಯ. ಬರುವ ದಿನಗಳಲ್ಲಿ ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ನಾಯಕಿ, ಜ್ಯೋತಿರಾದಿತ್ಯ ಸಿಂಧಿಯಾ ಚಿಕ್ಕಮ್ಮ ಯಶೋಧರಾ ಸಿಂಧಿಯಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.