56 ಇಂಚಿನ ಎದೆಯುಳ್ಳ ವ್ಯಕ್ತಿಯಿಂದ ಮಾತ್ರ ಬಡವರ ಸೇವೆ: ಮೋದಿ ಗುಣಗಾನ ಮಾಡಿದ ನಡ್ಡಾ - BJP President JP Nadda in Rohtas on Bihar election
ಬಿಹಾರದಲ್ಲಿ ಲೋಕಸಭಾ ಚುನಾವಣೆ ಕಾವು ಜೋರಾಗಿದೆ. ಎಲ್ಲ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಇಂದು ಭಾರತೀಯ ಜನತಾ ಪಾರ್ಟಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ರೋಹ್ತಾಸ್ನಲ್ಲಿ ತಮ್ಮ ಅಭ್ಯರ್ಥಿ ಪರ ಪ್ರಚಾರ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ರಾಜಕೀಯದಲ್ಲಿ ಭಾಷಣ ಮತ್ತು ಘೋಷಣೆ ನೀಡುವುದು ತುಂಬಾ ಸುಲಭ, ಆದರೆ 56 ಇಂಚಿನ ಎದೆವುಳ್ಳ ವ್ಯಕ್ತಿ ಮಾತ್ರ ಬಡವರ ಸೇವೆ ಸಲ್ಲಿಸಬಹುದು ಎಂದಿದ್ದಾರೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಗುಣಗಾಣ ಮಾಡಿದ್ದಾರೆ.