ಗಾಂಧಿ ಸಿದ್ಧಾಂತ ಅಳವಡಿಸಿಕೊಳ್ಳುವ ಮುನ್ನ 'ಗೋಡ್ಸೆ ನಾಶವಾದಿ' ಎಂದು ಒಪ್ಪಲಿ: ಬಿಜೆಪಿಗೆ ಸಿಎಂ ಬಾಘೆಲ್ ಟಾಂಗ್ - ನಾಥೂರಾಮ್ ಗೋಡ್ಸೆ
ರಾಯಪುರ (ಛತ್ತೀಸ್ಗಢ): ಬಿಜೆಪಿಯ ಮೇಲೆ ಹರಿಹಾಯ್ದಿರುವ ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಾಘೆಲ್, ಮಹಾತ್ಮ ಗಾಂಧಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸಿದ್ಧಾಂತಗಳನ್ನು ಬಿಜೆಪಿ ಅಳವಡಿಸಿಕೊಳ್ಳಲು ಬಯಸಿದರೆ, ಮೊದಲು ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಒಬ್ಬ 'ನಾಶವಾದಿ' ಎಂಬುದನ್ನು ಒಪ್ಪಿಕೊಳ್ಳಬೇಕು. ಸಾವರ್ಕರ್ ಸಿದ್ಧಾಂತಗಳನ್ನು ತ್ಯಜಿಸಬೇಕು ಮತ್ತು ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ತಿಳಿದುಕೊಳ್ಳಬೇಕು ಎಂದು ಟಾಂಗ್ ನೀಡಿದ್ದಾರೆ.