ಅಗ್ನಿ ಆರಾಧನೆ ಮೂಲಕ ವಿಶೇಷ ಯೋಗಾಸನ ಮಾಡಿದ ಬಿಜೆಪಿ ಸಂಸದ ; ವಿಡಿಯೋ - ವಿಶ್ವ ಯೋಗ ದಿನ
ಇಂದು ವಿಶ್ವ ಯೋಗ ದಿನ. ಹೀಗಾಗಿ ಜಗತ್ತಿನಾದ್ಯಂತ ಹಲವರು ವಿಶಿಷ್ಟವಾಗಿ ಯೋಗಾಸನಗಳನ್ನು ಮಾಡುವ ಮೂಲಕ ಈ ದಿನದ ಮಹತ್ವ ಸಾರುತ್ತಿದ್ದಾರೆ. ರಾಜಸ್ಥಾನದ ಟೋಂಕ್ ಸವಾಯಿ ಮಾಧೋಪುರದ ಬಿಜೆಪಿ ಸಂಸದ ಸುಖ್ಬೀರ್ ಸಿಂಗ್ ಜೌನಾಪುರಿಯಾ, ತುಂಬಾ ವಿಭಿನ್ನವಾಗಿ ಹಾಗೂ ಅಪಾಯಕಾರಿ ಯೋಗಾಸನ ಮಾಡುವ ಮೂಕ ಸುದ್ದಿಯಾಗಿದ್ದಾರೆ. ಸುಡುವ ಬಿಸಿಲಿನಲ್ಲಿ ಬೆಂಕಿಯ ವೃತ್ತವೊಂದನ್ನು ಮಾಡಿ ಅದರ ನಡುವೆ ಕುಳಿತ ಹಾಗೂ ನಿಂತ ಭಂಗಿಯಲ್ಲಿ ವಿವಿಧ ಆಸನಗಳನ್ನು ಪ್ರದರ್ಶಿಸಿದ್ದಾರೆ. ಯೋಗ ಮಾಡಿ ಆರೋಗ್ಯವಂತರಾಗಿ ಅಂತಾ ಬರೀ ಹೇಳೋದಷ್ಟೇ ಅಲ್ಲದೇ ಪ್ರತಿದಿನ 3 ರಿಂದ 4 ಗಂಟೆ ಕಾಲ ಯೋಗ, ಜಿಮ್ ಮತ್ತು ಧ್ಯಾನದಲ್ಲಿ ಸಮಯ ಕಳೆಯುತ್ತಾರಂತೆ ಈ ಸಂಸದರು.