ಕೆಲವರಿಗೆ ವಯಸ್ಸಾದ್ರೂ ಬುದ್ದಿ ಬೆಳೆಯಲ್ಲ, ಅಫ್ರಿದಿ ವಿರುದ್ಧ ಗಂಭೀರ್ ಗರಂ! - ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ
ನವದೆಹಲಿ: ಆರ್ಟಿಕಲ್ 370 ರದ್ದು ವಿಚಾರವಾಗಿ ಪಾಕ್ ಪ್ರಧಾನಿಗೆ ಸಾಥ್ ನೀಡಿ ಟ್ವೀಟ್ ಮಾಡಿದ್ದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ವಿರುದ್ಧ ಬಿಜೆಪಿ ಸಂಸದ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ವಾಗ್ದಾಳಿ ನಡೆಸಿದ್ರು. ಕೆಲವರಿಗೆ ವಯಸ್ಸಾದ್ರೂ ಕೂಡ ಬುದ್ದಿ ಬೆಳೆಯಲ್ಲ. ಅಫ್ರಿದಿಗೂ ಅದೇ ಆಗಿದೆ. ಇಂತಹ ಹೇಳಿಕೆ ನೀಡಿ ರಾಜಕೀಯಗೊಳಿಸುತ್ತಿರುವ ಆಫ್ರಿದಿ ರಾಜಕೀಯಕ್ಕೆ ಯಾಕೆ ಬರುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.