ಆ ರಾತ್ರಿ ಜಿಎಸ್ಟಿ ಮಹತ್ವ ಸಾರಿದ್ರು: ಮೋದಿ ಸರ್ಕಾರದ ಮಾಸ್ಟರ್ ಮೈಂಡ್! - ಅರುಣ್ ಜೇಟ್ಲಿ ನಿಧನ
ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಏಕರೂಪದ ತೆರಿಗೆ ಪದ್ಧತಿಯನ್ನು ರಾತ್ರೋ ರಾತ್ರಿ ಜಾರಿಗೆ ತಂದ ಕೀರ್ತಿ ಅರುಣ್ ಜೇಟ್ಲಿ ಅವರಿಗೆ ಸಲ್ಲುತ್ತದೆ. ವಿಪಕ್ಷಗಳಿಂದ ಏನೇ ವಿರೋಧ ವ್ಯಕ್ತವಾದರೂ, ಸಹನಾ ಮೂರ್ತಿಯಂತೆ ಎದುರಿಸಿ ಮಾತುಕತೆ ಮೂಲಕ ಪರಿಹರಿಸಿಕೊಂಡು. ರಾತ್ರೋರಾತ್ರಿ ಸಂಸತ್ನ ವಿಶೇಷ ಅಧಿವೇಶನ ನಡೆಸಿ, ಜಿಎಸ್ಟಿ ಜಾರಿ ತರಲಾಯಿತು. ಬಳಿಕ ತೆರಿಗೆ ನೀತಿ ಸರಳಗೊಳಿಸಲು ಸತತವಾಗಿ ಪ್ರಯತ್ನ ಮಾಡಿದ್ದರು. ಮೋದಿ ಸರ್ಕಾರಕ್ಕೆ ಜಿಎಸ್ಟಿ ಒಂದು ಕ್ರೆಡಿಟ್ ತಂದುಕೊಟ್ಟಿದೆ, ಈ ಟಾರ್ಗೆಟ್ಅನ್ನು ಯಶಸ್ವಿಯಾಗಿ ನಿಭಾಯಿಸಿದವರು ಜೇಟ್ಲಿ.