ನಂಬರ್ ಪ್ಲೇಟ್ ಇಲ್ಲದ ಬೈಕ್ ಅಡ್ಡಗಟ್ಟಿದ್ದಕ್ಕೆ ಪೊಲೀಸರ ವಿರುದ್ಧ ಯುವಕ ಗರಂ
ಆದಿಲಾಬಾದ್ (ತೆಲಂಗಾಣ): ನಂಬರ್ ಪ್ಲೇಟ್ ಇಲ್ಲದ ಬೈಕ್ ಅಡ್ಡಗಟ್ಟಿದ ಟ್ರಾಫಿಕ್ ಪೊಲೀಸರಿಗೆ ಯುವಕನೋರ್ವ ಧಮ್ಕಿ ಹಾಕಿರುವ ಘಟನೆ ತೆಲಂಗಾಣದ ಆದಿಲಾಬಾದ್ನಲ್ಲಿ ನಡೆದಿದೆ. ನನ್ನ ಬೈಕ್ ಯಾಕೆ ನಿಲ್ಲಿಸಿದ್ರಿ? ಏನು ಮಜಾಕ್ ಮಾಡ್ತಿದೀರಾ? ಮೊಹಮದ್ ಅನಾಸೆಲ್ವಿ ನನ್ನ ಹೆಸರು. ಪೋಟೋ - ವಿಳಾಸ ಎಲ್ಲಾ ತಗೋಳಿ.. ನನ್ನನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಮಾಸ್ಕ್ ಹಾಕಲ್ಲ, ನನ್ನ ಗಾಡಿ ನೀವೇ ಇಟ್ಕೊಳಿ ಎಂದು ರಂಪಾಟ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸದ್ಯ ಪೊಲೀಸರು ಯುವಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.