ಕರ್ನಾಟಕ

karnataka

ETV Bharat / videos

ವಿಡಿಯೋ: ಕ್ರಿಕೆಟ್ ಆಡಿದ ಬಿಜೆಪಿ ಸಂಸದೆ ಪ್ರಜ್ಞಾಸಿಂಗ್ ಠಾಕೂರ್, ಕಾಂಗ್ರೆಸ್‌ ಟೀಕೆ - Congress spokesperson Narendra Saluja news

By

Published : Dec 26, 2021, 2:24 PM IST

ಭೋಪಾಲ್: ಬಿಜೆಪಿ ಸಂಸದೆ ಪ್ರಜ್ಞಾಸಿಂಗ್ ಠಾಕೂರ್ ಕ್ರಿಕೆಟ್ ಆಡಿ ಗಮನ ಸೆಳೆದರು. ಭೋಪಾಲ್‌ನಲ್ಲಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಅವರು, ಕ್ರಿಕೆಟ್‌ ಆಟಕ್ಕೆ ಚಾಲನೆ ನೀಡಿದರು. ಅನಾರೋಗ್ಯದ ಕಾರಣದಿಂದಾಗಿ ಜಾಮೀನು ಮೇಲೆ ಹೊರಬಂದಿರುವ ಅವರು, ಸಾಮಾನ್ಯವಾಗಿ ಗಾಲಿಕುರ್ಚಿಯಲ್ಲಿ ಚಲಿಸುತ್ತಿದ್ದರೂ ಕೂಡ ಕೆಲವು ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಸಂಸದೆಯ ಕ್ರಿಕೆಟ್​ ಆಟಕ್ಕೆ ಕಾಂಗ್ರೆಸ್ ವಕ್ತಾರ ನರೇಂದ್ರ ಸಲೂಜಾ ಕಾಮೆಂಟ್ ಮಾಡಿದ್ದು, ಯಾರು ಹೆಚ್ಚಾಗಿ ವ್ಹೀಲ್ ಚೇರ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ, ಅನಾರೋಗ್ಯದ ಕಾರಣದಿಂದ ಕೋರ್ಟ್‌ನಿಂದ ಬಿಡುಗಡೆ ಆಗುತ್ತಾರೋ ಅವರು ಸಮಾರಂಭದಲ್ಲಿ ಕ್ರಿಕೆಟ್ ಆಡುವುದು, ಫುಟ್‌ಬಾಲ್ ಆಡುವುದು, ಡ್ಯಾನ್ಸ್ ಮಾಡುವುದನ್ನು ನೋಡುವುದೇ ಖುಷಿ ತಂದಿದೆ ಎಂದಿದ್ದಾರೆ. ಈ ಹಿಂದೆ ಅಕ್ಟೋಬರ್‌ನಲ್ಲಿ ನವರಾತ್ರಿ ಆಚರಣೆಗಳಲ್ಲಿ ಭಾಗವಹಿಸಿದ್ದ ಠಾಕೂರ್ ಗರ್ಬಾ ನೃತ್ಯಕ್ಕೆ ಹೆಜ್ಜೆ ಹಾಕಿದ್ದರು.

ABOUT THE AUTHOR

...view details