'ಭಾರತ್ ಮಾತಾ ಕೀ ಜೈ' ಘೋಷಣೆ ದುರುಪಯೋಗವಾಗ್ತಿದೆ: ಡಾ ಸಿಂಗ್! - ಡಾ. ಮನಮೋಹನ್ ಸಿಂಗ್
ರಾಷ್ಟ್ರೀಯತೆಯ ಘೋಷಣೆ 'ಭಾರತ್ ಮಾತಾ ಕೀ ಜೈ' ಇದೀಗ ದುರುಪಯೋಗ ಪಡಿಸಿಕೊಳ್ಳಲಾಗ್ತಿದೆ ಎಂದು ಮಾಜಿ ಪ್ರಧಾನಿ ಡಾ. ಸಿಂಗ್ ಕಳವಳ ವ್ಯಕ್ತಪಡಿಸಿದ್ದಾರೆ. ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಲಕ್ಷಾಂತರ ನಿವಾಸಿ ಹಾಗೂ ನಾಗರಿಕರನ್ನು ಹೊರತುಪಡಿಸಿದರೆ ಈ ಘೋಷಣೆ ದುರುಪಯೋಗವಾಗುತ್ತಿದೆ ಎಂದು ಹೇಳಿದ್ದಾರೆ. ಭಾರತ ಪ್ರಜಾಪ್ರಭುತ್ವ ದೇಶ ಎಂದು ಗುರುತಿಸಿಕೊಂಡಿದ್ದು, ವಿಭಿನ್ನ ಸಾಮಾಜಿಕ ಮತ್ತು ರಾಜಕೀಯ ದೃಷ್ಟಿಕೋನಗಳಿಂದ ಕೂಡಿದೆ ಎಂದಿದ್ದಾರೆ.