ಕರ್ನಾಟಕ

karnataka

ETV Bharat / videos

ಪಶ್ಚಿಮ ಬಂಗಾಳದಲ್ಲಿ ತುಸು ಉತ್ಸವ ಆಚರಣೆ..! - ಮಕರ ಸಂಕ್ರಾಂತಿಯಂದು ಸಾಂಪ್ರದಾಯಿಕ ತುಸು ಉತ್ಸವ ಆಚರಿಸಿದ ಬಂಗಾಳಿಯರು

By

Published : Jan 16, 2021, 7:07 PM IST

ಕೋಲ್ಕತಾ (ಪಶ್ಚಿಮ ಬಂಗಾಳ): ತುಸು ಉತ್ಸವವನ್ನು ಪಶ್ಚಿಮ ಬಂಗಾಳದ ಗ್ರಾಮೀಣ ಪ್ರದೇಶದಲ್ಲಿ ಬಂಗಾಳಿ ತಿಂಗಳ ಪೌಶ್‌ನ ಕೊನೆಯ ದಿನದಂದು ಅಂದರೆ ಮಕರ ಸಂಕ್ರಾಂತಿಯಂದು ಆಚರಿಸಲಾಗುತ್ತದೆ. ಆದ್ದರಿಂದ ಸ್ಥಳೀಯ ಭಾಷೆಗಳಲ್ಲಿ ‘ಮಕರ ಪರವ್’ ಎಂದು ಕರೆಯುತ್ತಾರೆ. ರಾಜ್ಯದ ನಾಡಿಯಾ ಮತ್ತು ಪಶ್ಚಿಮ ಬುರ್ದ್ವಾನ್ ಜಿಲ್ಲೆಗಳಲ್ಲಿ ಗ್ರಾಮೀಣ ಸಂಸ್ಕೃತಿಯ ಉತ್ಸಾಹದಿಂದ ಈ ಉತ್ಸವವನ್ನು ಆಚರಿಸಲಾಗುತ್ತದೆ. ಈ ಹಬ್ಬದ ಮುಖ್ಯ ಅಂಶಗಳೆಂದರೆ ಭತ್ತ, ಅಕ್ಕಿ ಹಾಗೂ ಜಾನಪದ ಹಾಡುಗಳು. ಹೊಲಗಳಲ್ಲಿ ಭತ್ತದ ರಾಶಿಯನ್ನು ಕೊಯ್ಲು ಮಾಡಿದ ನಂತರ, ಹೊಲದಲ್ಲಿ ಉಳಿದಿರುವ ಕೊನೆಯ ರಾಶಿಯನ್ನು ಸ್ಥಳೀಯವಾಗಿ ತುಸು ದೇವಿಯೆಂದು ಪೂಜಿಸಲಾಗುತ್ತದೆ. ವರ್ಣರಂಜಿತ ಬಟ್ಟೆ ಮತ್ತು ಬಿದಿರಿನ ಪರಿಕರಗಳಿಂದ ದೇವತೆಯ ವಿಗ್ರಹಗಳನ್ನು ಅಲಂಕರಿಸಲಾಗುತ್ತದೆ. ಈ ಬಾರಿ ಕೊರೊನಾ ನಡುವೆಯೂ ಇಲ್ಲಿನ ಜನ ತುಸು ಉತ್ಸವವನ್ನು ಸಾಂಪ್ರಾದಾಯಿಕವಾಗಿ ಆಚರಿಸಿದ್ದಾರೆ.

ABOUT THE AUTHOR

...view details