ಅಂಫಾನ್ ಅಬ್ಬರಕ್ಕೆ ತತ್ತರಿಸಿದ ಪಶ್ಚಿಮ ಬಂಗಾಳ: ಸೈಕ್ಷೋನ್ ಹೊಡೆತಕ್ಕೆ ಸಿಲುಕಿ ಬದುಕು ಬೀದಿ ಪಾಲು - ಪಶ್ಚಿಮ ಬಂಗಾಳ
ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಿರುವ ಅಂಫಾನ್ ಚಂಡಮಾರುತ ಈಗಾಗಲೇ 72 ಮಂದಿಯನ್ನು ಬಲಿ ತೆಗೆದುಕೊಂಡಿದೆ. ಭಾರಿ ಮಳೆಯ ಜೊತೆಗೆ ಗಂಟೆಗೆ 155 ರಿಂದ 185 ಕಿ.ಮೀ ವೇಗದಲ್ಲಿ ಬೀಸಿರುವ ಬಿರುಗಾಳಿ ಜನರ ಬದುಕನ್ನು ತಲ್ಲಣಗೊಳಿಸಿದ್ದು, ಅಪಾರ ಪ್ರಮಾಣದ ಹಾನಿಯುಂಟುಮಾಡಿದೆ. ಬೆಳೆದ ಬೆಳೆಯ ಫಲದ ನಿರೀಕ್ಷೆಯಲ್ಲಿದ್ದ ರೈತರ ತುತ್ತನ್ನು ಮಹಾಮಾರಿ ಅಂಫಾನ್ ಕಸಿದುಕೊಂಡಿದೆ. ಅನ್ನದಾತನ ಬದುಕು ಬೀದಿಗೆ ಬಂದಿದೆ. ಈ ಕುರಿತು ಒಂದು ವಿಡಿಯೋ ಇಲ್ಲಿದೆ ನೋಡಿ..
Last Updated : May 22, 2020, 9:05 PM IST