'ಅಂದು, ಇಂದು, ಎಂದಿಗೂ ಬೆಳಗಾವಿ ಕರ್ನಾಟಕದ್ದೇ' - ರಾಜ್ಯಸಭೆಯಲ್ಲಿ ಜಿಸಿ ಚಂದ್ರಶೇಖರ್ ಪುನರುಚ್ಚಾರ - ಜಿಸಿ ಚಂದ್ರಶೇಖರ್
ನವದೆಹಲಿ: ಕರ್ನಾಟಕ - ಮಹಾರಾಷ್ಟ್ರ ನಡುವಿನ ಬೆಳಗಾವಿ ಗಡಿ ವಿವಾದದ ಕುರಿತು ರಾಜ್ಯಸಭಾ ಕಲಾಪದಲ್ಲಿ ಜಿಸಿ ಚಂದ್ರಶೇಖರ್ ಮಾತನಾಡಿದ್ದಾರೆ. ಯಾವುದೇ ವಿವಾದ ಸಂಘರ್ಷದಿಂದ ಬಗೆಹರಿಯುವುದಿಲ್ಲ. ಮಹಾರಾಷ್ಟ್ರವು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದು, ಸ್ವಾಭಿಮಾನದ ನಮ್ಮ ರಾಜ್ಯ ಹೊತ್ತಿ ಉರಿಯುತ್ತಿದೆ. ಗಾಂಧಿ ಮಾರ್ಗದ ಮೂಲಕ ನಾವು ಹೋರಾಡಿ ನಮ್ಮ ಗಡಿಯನ್ನು ಸಂರಕ್ಷಿಸುತ್ತೇವೆಯೇ ಹೊರತು ಒಂದಿಂಚು ಜಾಗವನ್ನು ಸಹ ಬಿಟ್ಟುಕೊಡುವುದಿಲ್ಲ. ಅಂದು, ಇಂದು, ಎಂದಿಗೂ ಬೆಳಗಾವಿ ಕರ್ನಾಟದ ಅವಿಭಾಜ್ಯ ಅಂಗವಾಗಿಯೇ ಇರುತ್ತದೆ ಎಂದು ಪುನರುಚ್ಛರಿಸಿದ್ದಾರೆ. ಇದಕ್ಕೆ ರಾಜ್ಯಸಭಾಧ್ಯಕ್ಷ ಎಂ. ವೆಂಕಯ್ಯ ನಾಯ್ಡು ಮಾತನಾಡಿ ಇದು ಕೋರ್ಟ್ನಲ್ಲಿ ಇರುವುದರಿಂದ ಚರ್ಚೆಗೆ ಅವಕಾಶ ಇಲ್ಲ ಎಂದರು.
Last Updated : Mar 18, 2021, 1:02 PM IST