15 ಅಡಿ ಆಳದ ಬಾವಿಗೆ ಬಿದ್ದ ಮರಿ ಆನೆ.. ಅರಣ್ಯ ಇಲಾಖೆಯಿಂದ ರಕ್ಷಣೆ! - VIDEO - 15 ಅಡಿ ಆಳದ ಬಾವಿಗೆ ಬಿದ್ದ ಮರಿ ಆನೆ
ಮಯೂರ್ಭಂಜ್(ಒಡಿಶಾ): ಬಿಶುಶೋಲ್ ಗ್ರಾಮದ ಬಳಿಯ 15 ಅಡಿ ಆಳದ ಬಾವಿಗೆ ಮರಿ ಆನೆ ಬಿದ್ದು ನರಳಾಡಿರುವ ಘಟನೆ ನಡೆದಿದ್ದು, ಅರಣ್ಯ ಇಲಾಖೆ ಅದರ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದೆ. ಬಾವಿ ಆಳವಾದ ಕಾರಣ ಮರಿ ಆನೆ ಹೊರಬರಲು ಸಾಧ್ಯವಾಗಿಲ್ಲ. ಸ್ಥಳೀಯ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಅದರ ರಕ್ಷಣೆ ಮಾಡಿದ್ದಾರೆ.