'ಜೈ ಶ್ರೀ ರಾಮ್' ಬಾಬ್ರಿ ತೀರ್ಪು ಈ ರೀತಿ ಸ್ವಾಗತಿಸಿದ ಬಿಜೆಪಿ ಭೀಷ್ಮ ಅಡ್ವಾಣಿ! - ಬಾಬ್ರಿ ಮಸೀದಿ ಸುದ್ದಿ
ನವದೆಹಲಿ: 1992ರಲ್ಲಿ ನಡೆದ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಲಖನೌ ಸಿಬಿಐ ವಿಶೇಷ ನ್ಯಾಯಾಲಯ ಐತಿಹಾಸಿಕ ತೀರ್ಪು ಹೊರಡಿಸಿದ್ದು, ಎಲ್ಲ ಆರೋಪಿಗಳು ನಿರ್ದೋಷಿಗಳು ಎಂದು ಆದೇಶ ಹೊರಡಿಸಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಭೀಷ್ಮ ಎಲ್.ಕೆ. ಅಡ್ವಾಣಿ ತೀರ್ಪು ಸ್ವಾಗತಿಸಿದ್ದಾರೆ. ಜೈ ಶ್ರೀ ರಾಮ್ ಎಂದು ಪಠಣ ಮಾಡಿರುವ ಅವರು ಐತಿಹಾಸಿಕ ತೀರ್ಪು 1992ರಲ್ಲಿ ನಡೆದ ರಾಮ ಜನ್ಮಭೂಮಿ ಚಳವಳಿ, ನನ್ನ ವೈಯಕ್ತಿಕ ಹಾಗೂ ಬಿಜೆಪಿಯ ನಂಬಿಕೆ ಮತ್ತು ಬದ್ಧತೆ ಸಮರ್ಥಿಸುತ್ತದೆ ಎಂದಿದ್ದಾರೆ. ಇದು ನಮ್ಮೆಲ್ಲರಿಗೂ ಸಂತೋಷದ ಕ್ಷಣ. ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನೋಡುವ ಕನಸು ಆದಷ್ಟು ಬೇಗ ನನಸಾಗಲಿದೆ ಎಂದಿದ್ದಾರೆ.