ಗಣರಾಜ್ಯೋತ್ಸವ ಪಥಸಂಚಲನ: ಕಣ್ಮನ ಸೆಳೆದ ಅಯೋಧ್ಯೆ ರಾಮ ಮಂದಿರ, ವಿಜಯನಗರ ಅರಮನೆ! - ಅಯೋಧ್ಯೆ ರಾಮಮಂದಿರ ಸ್ತಬ್ಧಚಿತ್ರ
72ನೇ ಗಣರಾಜೋತ್ಸವ ಅಂಗವಾಗಿ ನಡೆದ ಸ್ತಬ್ಧಚಿತ್ರ ಪಥಸಂಚಲನದಲ್ಲಿ ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀರಾಮ ಮಂದಿರ ಹಾಗೂ ಕರ್ನಾಟಕದ ವಿಜಯನಗರ ಸ್ತಬ್ಧಚಿತ್ರ ವಿಶೇಷ ಆಕರ್ಷಣೆಯಾಗಿದ್ದವು. ಅಯೋಧ್ಯೆ ರಾಮ ಮಂದಿರ ಸ್ತಬ್ಧಚಿತ್ರದ ಮುಂಭಾಗದಲ್ಲಿ ಮಹರ್ಷಿ ವಾಲ್ಮೀಕಿ ಕುಳಿತುಕೊಂಡಿರುವ ಚಿತ್ರ, ಪ್ರಾಚೀನ ಕಾಲದ ಅಯೋಧ್ಯೆ ಮಂದಿರ ಹಾಗೂ ಶಬರಿ, ಹನುಮಾನ್ ಚಿತ್ರ ಕೂಡ ಪ್ರಮುಖವಾಗಿದ್ದವು. ವಿಜಯನಗರ ಸಾಮ್ರಾಜ್ಯದ ವೈಭವ ಸಾರುವ ಸ್ತಬ್ಧಚಿತ್ರ ಕೂಡ ಇದರಲ್ಲಿ ಭಾಗಿಯಾಗಿದ್ದು, ಉಗ್ರ ನರಸಿಂಹ, ಭಗವಾನ್ ಹನುಮಾನ್ ಜನ್ಮ ಸ್ಥಳ ಅಂಜನಾದ್ರಿ ಬೆಟ್ಟ, ವಿಜಯನಗರ ಸಾಮ್ರಾಜ್ಯದ ಸಾಮ್ರಾಟ ಶ್ರೀ ಕೃಷ್ಣದೇವರಾಯರ 1509ರಲ್ಲಿ ನಡೆದ ಪಟ್ಟಾಭಿಷೇಕ ಸಮಾರಂಭ ಚಿತ್ರ ಇದರಲ್ಲಿದ್ದವು.